ಗ್ರೀನ್ ಪ್ಲಾನೆಟ್ ಕನ್ನಡ

ಗ್ರೀನ್ ಪ್ಲಾನೆಟ್ ಕನ್ನಡ ವೆಬ್ ಸೈಟ್ ನಲ್ಲಿ, ಕೃಷಿ, ಸಾವಯವ ಕೃಸಿ, ನೈಸರ್ಗಿಕ ಕೃಷಿ, ಶೂನ್ಯಭಂಡವಾಳದ ಕೃಷಿ, ಗ್ರೀನ್ ಪ್ಲಾನೆಟ್ ಬಯೋ ಪ್ರಾಡಕ್ಟ್ಸ್ ಬಗ್ಗೆ ಕನ್ನಡದಲ್ಲಿ ತಿಳಿಸಲು ಪ್ರಯತ್ನ ಮಾಡಲಾಗುವುದು.
ಯಾವುದೇ ಪ್ರಬಂಧಗಳಲ್ಲಿ ಏನಾದರು ದೋಷಗಳು ಕಂಡು ಬಂದಲ್ಲಿ ದಯವಿಟ್ಟು ತಿಳಿಸಿ. ಇಲ್ಲಿ ಯಾರೂ ಕೂಡ ಸರ್ವಜ್ನನಾಗುವುದಿಲ್ಲ. ನಾವೆಲ್ಲರು ಒಬ್ಬರಿಂದ ಇನ್ನೊಬ್ಬರು ಕಲಿಯಬೇಕಾಗುತ್ತದೆ.
ನನಗೆ ತಿಳಿದ ಮಟ್ಟಿಗೆ ನಾನು ಇಲ್ಲಿ ಬರೆಯಲು ಪ್ರಯತ್ನ ಪಡುತ್ತೇನೆ. ಒಟ್ಟಾರೆ ದೇಶದ ಬೆನ್ನೆಲುಬಾದ ರೈತನಿಗೆ ನಮ್ಮಿಂದ ಅಲ್ಪ ಸಹಾಯವಾದರೆ ಅದೇ ನಮ್ಮ ಭಾಗ್ಯ.
ಇತ್ತೀಚೆಗೆ ವಿಧ್ಯಾವಂತ ಯುವ ಸಮೂಹ ಕೃಷಿ ಕಡೆಗೆ ಮುಖ ಮಾಡುತ್ತಿದ್ದು, ಸುಧಾರಿತ, ತಂತ್ರಜ್ನಾನ ಬಳಸಿ, ಕಡಿಮೆ ಖರ್ಚಿನಲ್ಲಿ ಅಧಿಕ ಬೆಳೆಯನ್ನು ವಿಷವಿಲ್ಲದೆ ಬೆಳೆದು ತಮ್ಮಗಳ ಆರೋಗ್ಯದ ಜೊತೆಗೆ ದೇಶದ ಜನರ ಆರೋಗ್ಯವನ್ನು ಕಾಪಾಡಬೇಕಾಗುತ್ತದೆ.
ಮಣ್ಣು ದೇಶದ ಕಣ್ಣು, ಆದರೆ ಆ ಕಣ್ಣಿನ ಮೇಲೆ ಪರಕೀಯರ ಕಣ್ಣು ಬಿದ್ದು "ಹಸಿರು ಕ್ರಾಂತಿ" (Green Revolution) ಎಂಬ ಮಹಾಮಾರಿಯನ್ನು 60ರ ದಶಕದಲ್ಲಿ ದೇಶದೊಳಗೆ ತಂದು ನಮ್ಮ ಕಣ್ಣಾದ ಮಣ್ಣನ್ನು ನಿರ್ಜೀವಿಯನ್ನಾಗಿ ಮಾಡಿದ್ದಾರೆ. ಆ ಕಣ್ಣನ್ನು ಮತ್ತೆ ಫಲವತ್ತತೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ. ಆದರೆ ನಮ್ಮ ಪುರಾತನ ಪದ್ದತಿಯಾದ ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ, ಹಸಿರೆಲೆ ಗೊಬ್ಬರದಿಂದ ನಮ್ಮ ಮಣ್ಣನ್ನು ಫಲವತ್ತತೆ ಮಾಡಲು ಈಗ ಸಾದ್ಯವಿಲ್ಲ, ಏಕೆಂದರೆ ಮೊದಲು ನಮ್ಮ ರೈತ ನಮ್ಮದೇ ದೇಶದ ಹಸುಗಳನ್ನು ಸಾಕುತ್ತಿದ್ದನ್ನು, ಅಲ್ಲಿಯೂ ಕೂಡ ಹಣದ ಆಸೆ ತೋರಿಸಿ, ನಮ್ಮ ದೇಶೀ ತಳಿಯ ಜಾಗದಲ್ಲಿ ಪರಕೀಯ ಹಸುಗಳನ್ನು ತಂದು, ಕೊಟ್ಟಿಗೆ ಗೊಬ್ಬರವನ್ನು ಕಲ್ಮಶ ಮಾಡಿದ್ದಾರೆ. ಶೀಘ್ರವಾಗಿ ಮಣ್ಣನ್ನು ಫಲವತ್ತಾಗಿ ಮಾಡಲು ಹಾಗೂ ರೈತನ ಮಿತ್ರ "ಎರೆಹುಳು ಹಾಗೂ ಇತರ ಸೂಕ್ಷ್ಮ ಜೀವಿಗಳನ್ನು ತರಲು, ಜೈವಿಕ  ಉತ್ಪನ್ನಗಳನ್ನು ಬಳಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಉತ್ತಮ ಗುಣ ಮಟ್ಟದ ಜೈವಿಕ ಉತ್ಪನ್ನಗಳನ್ನು (Bio Products) "ಗ್ರೀನ್ ಪ್ಲಾನೆಟ್ ಬಯೋ ಪ್ರಾಡಕ್ಟ್ಸ್" (Green Planet Bio Products) ತಂದಿದೆ.
ಗ್ರೀನ್ ಪ್ಲಾನೆಟ್ ಬಯೋ ಪ್ರಾಡಕ್ಟ್ಸ್, ಕಂಪನಿಯು ರೈತನಿಗೆ ಬೇಕಾದ ಎಲ್ಲಾ ಉತ್ಪನ್ನಗಳನ್ನು 2002 ರಿಂದ ರೈತರಿಗೆ ಕೈಗೆಟುಕುವ ಧರದಲ್ಲಿ ನೀಡುತ್ತಿದೆ. ಇದರಲ್ಲಿ ಕೃಷಿ ಉತ್ಪನ್ನಗಳು (Agriculture Products), ಆರೋಗ್ಯ ಉತ್ಪನ್ನಗಳು (Health Products), ವೈಯುಕ್ತಿಕ ಉತ್ಪನ್ನಗಳು (Personal Care Products), ಗೃಹ ಉಪಯೋಗಿ (Home care Products), ಹೈನುಗಾರಿಕೆ (Veterinary Products) ಮತ್ತು ಇತರೆ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಕೃಷಿ ಹಾಗೂ ಜೈವಿಕ ಉತ್ಪನ್ನಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಕರೆ ಮಾಡಿ, ಕುಮಾರ್ ಜಿ ಹೆಚ್, 73491 99551.


-:ಜೀವಾಮೃತ:-
ಜೀವ + ಅಮೃತ => ಜೀವಾಮೃತ. ಹೇಸರೇ ಹೇಳುವ ಹಾಗೆ ಇದು ರೈತನ ಭೂಮಿಗೆ ಅಮೃತಕ್ಕೆ ಸಮಾನ. ಈ ಅಮೃತವನ್ನು ತಯಾರಿಸಲು ನಮ್ಮ ದೇಶದ ಹಾಗೂ ರೈತನ ಮಾತೆಯಾದ ಗೋವು ಬೇಕು. ಗೋವು ಅದರಲ್ಲೂ ದೇಶೀಯ ಆಕಳು ಬಹುಮುಖ್ಯ ಪಾತ್ರ ವಹಿಸುತ್ತದೆ.

ಜೀವಾಮೃತ ತಯಾರಿಸಲು ಬೇಕಾದ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ,
1. ದೇಶೀಯ ಆಕಳ ಗೋಮೂತ್ರ     - 10 ಲೀ
2. ದೇಶೀಯ ಆಕಳ ಸಗಣಿ              - 10 ಕೆಜಿ
3. ಬೆಲ್ಲ (ಹುಳಿ ಬೆಲ್ಲ)                      - 2 ಕೆಜಿ
4. ದ್ವಿದಳ ದಾನ್ಯದ ಹಿಟ್ಟು                - 2 ಕೆಜಿ
5. ಹುಳಿ ಮಜ್ಜಿಗೆ                            - 5 ಲೀ
6. ಬದುವಿನ ಮಣ್ಣು                        - 1 ಕೆಜಿ (ಬೊಗಸೆ)

ಜೀವಾಮೃತ ತಯಾರಿಸುವ ವಿಧಾನ,
1. ಒಂದು 200 ಲೀ ಡ್ರಮ್ ತೆಗೆದುಕೊಂಡು, ಅದಕ್ಕೆ 150 ಲೀ ನೀರು ತುಂಬಬೇಕು.
2. ಗೋಮೂತ್ರವನ್ನು ಈ ಡ್ರಮ್ ಗೆ ಸೇರಿಸಿ.
3. ಗೋಮಯ (ಸಗಣಿ) ವನ್ನು ಒಂದು ಸಣ್ಣ ಬಕೇಟ್ ನಲ್ಲಿ ಚನ್ನಾಗಿ ಕಲಸಿ, ದೊಡ್ಡ ಡ್ರಮ್ ಗೆ ಸೇರಿಸಿ.
4. ಬೆಲ್ಲವನ್ನು ಚನ್ನಾಗಿ ಪುಡಿ ಮಾಡಿ ಡೊಡ್ಡ ಡ್ರಮ್ ಗೆ ಸೇರಿಸಿ.
5. ದ್ವಿದಳ ದಾನ್ನದ ಹಿಟ್ಟನ್ನು ಸಣ್ಣ ಬಕೇಟ್ ನಲ್ಲಿ ಚನ್ನಾಗಿ ಕಲಸಿ ದೊಡ್ಡ ಡ್ರಮ್ ಗೆ ಸೇರಿಸಿ.
6. ಮಗ್ಗಿಗೆಯನ್ನು ಡ್ರಮ್ ಗೆ ಸೇರಿಸಿ ಮತ್ತು ಮಣ್ಣನ್ನು ಕೂಡ ಸೇರಿಸಿ.
ಈ ಮಿಶ್ರಣವೆಲ್ಲ ಸೇರಿಸಿದ ಮೇಲೆ ಚನ್ನಾಗಿ ಒಂದು ಕೋಲಿನ ಸಹಾಯದಿಂದ ಎಡದಿಂದ ಬಲಕ್ಕೆ 21 ಬಾರಿ ತಿರುಗಿಸಬೇಕು.
ಮಾರನೇ ದಿನದಿಂದ ಪ್ರತಿ ಬೆಳಿಗ್ಗೆ ಒಂದು ಕೊಡ ನೀರನ್ನು ಸೇರಿಸಿ, ಬೆಳಿಗ್ಗೆ, ಸಾದ್ಯವಾದರೆ ಮದ್ಯಾಹ್ನ ಹಾಗೂ ಸಾಯಂಕಾಲ 21 ಬಾರಿ ತಿರುಗಿಸಬೇಕು. ಇದನ್ನು 5 ರಿಂದ 6 ದಿನ ಮಾಡಿ, 7 ದಿನದ ಒಳಗಾಗಿ ಭೂಮಿಗೆ ಸೇರಿಸಬೇಕು.


ಬಳಸುವ ವಿಧಾನ:
1. ಜೀವಾಮೃತವನ್ನು ಹೊಲಕ್ಕೆ ಬಿಡುವ ನೀರಿನ ಜೊತೆ ಕೂಡ ಸೇರಿಸಿ ಬಿಡಬಹುದು.
2. ಹನಿ ನೀರಾವರಿ ಜೊತೆಗೆ ಕೂಡ ಕೊಡಬಹುದು.
3. ಶೇ.10% ರಷ್ಟನ್ನು ನೀರಿನ ಜೊತೆ ಸೇರಿಸಿ  ಸ್ಪ್ರೇ ಮಾಡಬಹುದು.

ಜೀವಾಮೃತದಲ್ಲಿ ಸಾರಜನಕ, ರಂಜಕ, ಪೋಟಾಷ್ ಮತ್ತು ಸೂಕ್ಷ್ಮ ಪೋಷಕಾಂಶಗಳು ಇರುತ್ತದೆ. ಸಾವಯವ ಕೃಷಿಯಲ್ಲಿ ಬೇಕಾಗುವ ಎಲ್ಲಾ ಸೂಕ್ಷ್ಮ ಪೋಷಕಾಂಶಗಳು ಜೀವಾಮೃತದಲ್ಲಿ ಇರುತ್ತವೆ. ಭೂಮಿಗೆ ಬೇಕಾಗುವ ಸಾವಯವ ಅಂಶವನ್ನು ಹೆಚ್ಚಿಸಿ, ರೈತನ ಮಿತ್ರರಾದ ಎರೆಹುಳು ಹಾಗೂ ಸೂಕ್ಷ್ಮ ಜೀವಿಗಳನ್ನು ಹೆಚ್ಚಿಸುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಭೂಮಿಯು ತುಂಬಾ ಬರಡಾಗಿದ್ದು, ಇನ್ನೂ ಹೆಚ್ಚಿನ ಫಲವತ್ತತೆಯನ್ನು ಹೆಚ್ಚಿಸಲು, ಗ್ರೀನ್ ಪ್ಲಾನೆಟ್ ಬಯೋ ಪ್ರಾಡಕ್ಟ್ಸ್ ನ ಕೆಳಗಿನ ಉತ್ಪನ್ನಗನ್ನು ಜೀವಾಮೃತದ ಜೊತೆಗೆ ಸೇರಿಸಬಹುದು,
ಗ್ರೀನ್ ಪ್ಲಾನೆಟ್ ಬಯೋ ಪ್ರಾಡಕ್ಟ್ಸ್ ಉತ್ಪನ್ನಗಳು,

1. ಪ್ರೀಮಿಯಮ್ (Power Plant Premium), ಇದನ್ನು ಜೀವಾಮೃತ ತಯಾರಿಸುವ ಸಮಯದಲ್ಲೆ ಡ್ರಮ್ ಗೆ ಸೇರಿಸಬೇಕು.
2. ಗ್ರೋ (Power Plant Grow),
3. ನೈಟ್ರೊಕಿಂಗ್ (Power Plant Nitroking),
4. ಪಿ ಪಿ ಎಫ್ ಸಿ (Power Plant PPFC),
5. ಬ್ಲೂಮ್ (ಪಲಕ್ಕೆ ಬಂದ ಬೆಳೆಗಳಿಗೆ) (Power Plant Bloom)