-:ಜೀವಾಮೃತ:-
ಜೀವ + ಅಮೃತ => ಜೀವಾಮೃತ. ಹೇಸರೇ ಹೇಳುವ ಹಾಗೆ ಇದು ರೈತನ ಭೂಮಿಗೆ ಅಮೃತಕ್ಕೆ ಸಮಾನ. ಈ ಅಮೃತವನ್ನು ತಯಾರಿಸಲು ನಮ್ಮ ದೇಶದ ಹಾಗೂ ರೈತನ ಮಾತೆಯಾದ ಗೋವು ಬೇಕು. ಗೋವು ಅದರಲ್ಲೂ ದೇಶೀಯ ಆಕಳು ಬಹುಮುಖ್ಯ ಪಾತ್ರ ವಹಿಸುತ್ತದೆ.
ಜೀವಾಮೃತ ತಯಾರಿಸಲು ಬೇಕಾದ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ,
1. ದೇಶೀಯ ಆಕಳ ಗೋಮೂತ್ರ - 10 ಲೀ
2. ದೇಶೀಯ ಆಕಳ ಸಗಣಿ - 10 ಕೆಜಿ
3. ಬೆಲ್ಲ (ಹುಳಿ ಬೆಲ್ಲ) - 2 ಕೆಜಿ
4. ದ್ವಿದಳ ದಾನ್ಯದ ಹಿಟ್ಟು - 2 ಕೆಜಿ
5. ಹುಳಿ ಮಜ್ಜಿಗೆ - 5 ಲೀ
6. ಬದುವಿನ ಮಣ್ಣು - 1 ಕೆಜಿ (ಬೊಗಸೆ)
ಜೀವಾಮೃತ ತಯಾರಿಸುವ ವಿಧಾನ,
1. ಒಂದು 200 ಲೀ ಡ್ರಮ್ ತೆಗೆದುಕೊಂಡು, ಅದಕ್ಕೆ 150 ಲೀ ನೀರು ತುಂಬಬೇಕು.
2. ಗೋಮೂತ್ರವನ್ನು ಈ ಡ್ರಮ್ ಗೆ ಸೇರಿಸಿ.
3. ಗೋಮಯ (ಸಗಣಿ) ವನ್ನು ಒಂದು ಸಣ್ಣ ಬಕೇಟ್ ನಲ್ಲಿ ಚನ್ನಾಗಿ ಕಲಸಿ, ದೊಡ್ಡ ಡ್ರಮ್ ಗೆ ಸೇರಿಸಿ.
4. ಬೆಲ್ಲವನ್ನು ಚನ್ನಾಗಿ ಪುಡಿ ಮಾಡಿ ಡೊಡ್ಡ ಡ್ರಮ್ ಗೆ ಸೇರಿಸಿ.
5. ದ್ವಿದಳ ದಾನ್ನದ ಹಿಟ್ಟನ್ನು ಸಣ್ಣ ಬಕೇಟ್ ನಲ್ಲಿ ಚನ್ನಾಗಿ ಕಲಸಿ ದೊಡ್ಡ ಡ್ರಮ್ ಗೆ ಸೇರಿಸಿ.
6. ಮಗ್ಗಿಗೆಯನ್ನು ಡ್ರಮ್ ಗೆ ಸೇರಿಸಿ ಮತ್ತು ಮಣ್ಣನ್ನು ಕೂಡ ಸೇರಿಸಿ.
ಈ ಮಿಶ್ರಣವೆಲ್ಲ ಸೇರಿಸಿದ ಮೇಲೆ ಚನ್ನಾಗಿ ಒಂದು ಕೋಲಿನ ಸಹಾಯದಿಂದ ಎಡದಿಂದ ಬಲಕ್ಕೆ 21 ಬಾರಿ ತಿರುಗಿಸಬೇಕು.
ಮಾರನೇ ದಿನದಿಂದ ಪ್ರತಿ ಬೆಳಿಗ್ಗೆ ಒಂದು ಕೊಡ ನೀರನ್ನು ಸೇರಿಸಿ, ಬೆಳಿಗ್ಗೆ, ಸಾದ್ಯವಾದರೆ ಮದ್ಯಾಹ್ನ ಹಾಗೂ ಸಾಯಂಕಾಲ 21 ಬಾರಿ ತಿರುಗಿಸಬೇಕು. ಇದನ್ನು 5 ರಿಂದ 6 ದಿನ ಮಾಡಿ, 7 ದಿನದ ಒಳಗಾಗಿ ಭೂಮಿಗೆ ಸೇರಿಸಬೇಕು.
ಬಳಸುವ ವಿಧಾನ:
1. ಜೀವಾಮೃತವನ್ನು ಹೊಲಕ್ಕೆ ಬಿಡುವ ನೀರಿನ ಜೊತೆ ಕೂಡ ಸೇರಿಸಿ ಬಿಡಬಹುದು.
2. ಹನಿ ನೀರಾವರಿ ಜೊತೆಗೆ ಕೂಡ ಕೊಡಬಹುದು.
3. ಶೇ.10% ರಷ್ಟನ್ನು ನೀರಿನ ಜೊತೆ ಸೇರಿಸಿ ಸ್ಪ್ರೇ ಮಾಡಬಹುದು.
ಜೀವಾಮೃತದಲ್ಲಿ ಸಾರಜನಕ, ರಂಜಕ, ಪೋಟಾಷ್ ಮತ್ತು ಸೂಕ್ಷ್ಮ ಪೋಷಕಾಂಶಗಳು ಇರುತ್ತದೆ. ಸಾವಯವ ಕೃಷಿಯಲ್ಲಿ ಬೇಕಾಗುವ ಎಲ್ಲಾ ಸೂಕ್ಷ್ಮ ಪೋಷಕಾಂಶಗಳು ಜೀವಾಮೃತದಲ್ಲಿ ಇರುತ್ತವೆ. ಭೂಮಿಗೆ ಬೇಕಾಗುವ ಸಾವಯವ ಅಂಶವನ್ನು ಹೆಚ್ಚಿಸಿ, ರೈತನ ಮಿತ್ರರಾದ ಎರೆಹುಳು ಹಾಗೂ ಸೂಕ್ಷ್ಮ ಜೀವಿಗಳನ್ನು ಹೆಚ್ಚಿಸುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಭೂಮಿಯು ತುಂಬಾ ಬರಡಾಗಿದ್ದು, ಇನ್ನೂ ಹೆಚ್ಚಿನ ಫಲವತ್ತತೆಯನ್ನು ಹೆಚ್ಚಿಸಲು, ಗ್ರೀನ್ ಪ್ಲಾನೆಟ್ ಬಯೋ ಪ್ರಾಡಕ್ಟ್ಸ್ ನ ಕೆಳಗಿನ ಉತ್ಪನ್ನಗನ್ನು ಜೀವಾಮೃತದ ಜೊತೆಗೆ ಸೇರಿಸಬಹುದು,
ಗ್ರೀನ್ ಪ್ಲಾನೆಟ್ ಬಯೋ ಪ್ರಾಡಕ್ಟ್ಸ್ ಉತ್ಪನ್ನಗಳು,
1. ಪ್ರೀಮಿಯಮ್ (Power Plant Premium), ಇದನ್ನು ಜೀವಾಮೃತ ತಯಾರಿಸುವ ಸಮಯದಲ್ಲೆ ಡ್ರಮ್ ಗೆ ಸೇರಿಸಬೇಕು.
2. ಗ್ರೋ (Power Plant Grow),
3. ನೈಟ್ರೊಕಿಂಗ್ (Power Plant Nitroking),
4. ಪಿ ಪಿ ಎಫ್ ಸಿ (Power Plant PPFC),
5. ಬ್ಲೂಮ್ (ಪಲಕ್ಕೆ ಬಂದ ಬೆಳೆಗಳಿಗೆ) (Power Plant Bloom)